ಅಭಿಪ್ರಾಯ / ಸಲಹೆಗಳು

ಕರ್ತವ್ಯಗಳು

  1. ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ ಭಾರತ ಪರಿಕಲ್ಪನೆಯನ್ವಯ ಸ್ವಾವಲಂಬಿ ಕರ್ನಾಟಕ ನಿರ್ಮಾಣ ಉದ್ದೇಶದಿಂದ,

    ಅ) ಕರ್ನಾಟಕ ಕೃಷಿ ಉತ್ಪನ್ನ ಮಾರಾಟ ನಿಯಂತ್ರಣ ಅಭಿವೃದ್ಧಿ ಕಾಯ್ದೆ ತಿದ್ದುಪಡಿ (2020).

    ಆ) ಕೇಂದ್ರ ಸರ್ಕಾರದ ರೈತ ಉತ್ಪನ್ನ ಮತ್ತು ವಾಣಿಜ್ಯ ಉತ್ತೇಜನ ಹಾಗೂ ಸೌಲಭ್ಯಗಳ ಕಾಯ್ದೆ ಸುಗ್ರೀವಾಜ್ಞೆ (2020).

    ಇ) ರೈತರ ಸಾಮರ್ಥ್ಯಾಭಿವೃದ್ಧಿ ಮತ್ತು ರಕ್ಷಣೆ (ರೈತರ ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳು) ಕಾಯ್ದೆ ಸುಗ್ರೀವಾಜ್ಞೆ (2020).

    ಈ) ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ (2020).

ಈ ಎಲ್ಲಾ ಕಾಯ್ದೆಗಳ ಅನ್ವಯ ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮಾರ್ಗೋಪಾಯಗಳನ್ನು ರೂಪಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.

  1. ಕರ್ನಾಟಕದಲ್ಲಿ ಮೇಲಿನ ಮಾರುಕಟ್ಟೆ ಕಾಯ್ದೆಗಳ ಅನ್ವಯ ಹಾಗೂ ಭೂ ಸುಧಾರಣಾ ಕಾಯ್ದೆಯು ಒಳಗೊಂಡAತೆ ಸುಸ್ಥಿರ ಕೃಷಿಗಾಗಿ ತಜ್ಷರು, ರೈತರು, ವಿಜ್ಞಾನಿಗಳು, ಅಧಿಕಾರಿಗಳು ಒಳಗೊಂಡAತೆ ಚರ್ಚೆ, ಸಂವಾದ ಏರ್ಪಡಿಸಿ ಸಮಗ್ರ ಕೃಷಿ ನೀತಿ, ನೀರಾವರಿ ನೀತಿ, ಸಾಲ ನೀತಿ, ಬೆಲೆ ನೀತಿ, ಮಾರುಕಟ್ಟೆ ನಿಯಮಗಳ ಅಧ್ಯಯನ ಹಾಗೂ ಸರ್ಕಾರಕ್ಕೆ ಶಿಫಾರಸ್ಸು ವರದಿಗಳನ್ನು ಸಲ್ಲಿಸುವುದು.
  2. ರಾಷ್ಟçದ ಆಹಾರ ಭದ್ರತೆ ಧ್ಯೇಯಗಳನ್ನು ಗಮನದಲ್ಲಿರಿಸಿಕೊಂಡು, ದೇಶಿಯ ಪೂರೈಕೆ/ ಬೇಡಿಕೆ ಜೊತೆಗೆ ಹೊರದೇಶಗಳಲ್ಲಿಯ ಪೂರೈಕೆ/ಬೇಡಿಕೆಗಳನ್ನು ಆಧರಿಸಿ ರಫ್ತು ಮತ್ತು ಆಮದುಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಮತ್ತು ರೈತರಿಗೆ ಮಾಹಿತಿ ಒದಗಿಸುವುದು.
  3. ಆಧುನಿಕ ಮಾರುಕಟ್ಟೆ, ವಿದ್ಯುನ್ಮಾನ ವ್ಯಾಪಾರ (ಇ-ವ್ಯಾಪಾರ), ಭವಿಷ್ಯದ ಮಾರುಕಟ್ಟೆ (Future Trading), ವಾಣಿಜ್ಯ ಬೆಳೆಗಳ ಆಧುನಿಕ ವ್ಯಾಪಾರೋದ್ಯಮದ ಪ್ರಯೋಜನಗಳನ್ನು ಪಡೆಯಲು ಅನುವಾಗುವಂತೆ ಬೆಳೆ ಉತ್ಪಾದನೆ ಮತ್ತು ಬೆಲೆ ಮುನ್ನಂದಾಜು ಮಾಹಿತಿಯನ್ನು ಸರ್ಕಾರ ಮತ್ತು ರೈತರಿಗೆ ನೀಡುವುದು,
  4. ಸಾಮೂಹಿಕ ಮತ್ತು ಗುಂಪು ಮಾರಾಟಗಾರಿಕೆ ಉಪಕ್ರಮಗಳ ಮೂಲಕ ಮಧ್ಯವರ್ತಿಗಳಿಂದ ಉಂಟಾಗುವ ಶೋಷಣೆಯನ್ನು ತಪ್ಪಿಸುವುದರ ಬಗ್ಗೆ ಅಧ್ಯಯನ ನಡೆಸಿ ಸರ್ಕರಕ್ಕೆ ಸೂಕ್ತ ಶಿಫಾರಸ್ಸು ಮಾಡುವುದು.
  5. ಕರ್ನಾಟಕದಲ್ಲಿ ಪ್ರಮುಖ ಕೃಷಿ / ತೋಟಗಾರಿಕಾ ಬೆಳೆಗಳ ಸಮಗ್ರ ಸಾಗುವಳಿ ವೆಚ್ಚವನ್ನು ಪಾರದರ್ಶಕವಾಗಿ ರೈತರೊನ್ನೊಳಗೊಂಡು ಕೃಷಿ / ತೋಟಗಾರಿಕಾ ವಿಶ್ವವಿದ್ಯಾನಿಲಯಗಳ ಮೂಲಕ ಅಂದಾಜಿಸುವುದು ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸುವುದು.
  6. ರೈತರ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನಿಸಿ ಪ್ರಮುಖ ಕೃಷಿ ಉತ್ಪನ್ನಗಳ ಲಾಭದಾಯಕ ಬೆಲೆಗಳನ್ನು ಬಿತ್ತನೆಗೆ ಕನಿಷ್ಠ ಎರಡು ತಿಂಗಳುಗಳ ಮುಂಚೆ ಶಿಫಾರಸ್ಸು ಮಾಡುವುದು.
  7. ಕೇಂದ್ರ ಸರ್ಕಾರ ಘೋಷಿತ ಬೆಂಬಲ ಬೆಲೆಗಳು, ಮಾರುಕಟ್ಟೆ ಬೆಲೆಗಳು ಮಧ್ಯೆ ವ್ಯತ್ಯಾಸ ಕಂಡುಹಿಡಿಯುವುದು. ಘೋಷಿತ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆ ಬೆಲೆ ಕಡಿಮೆಯಾದಾಗ ಸರ್ಕಾರದ ಮಧ್ಯಸ್ಥಿಕೆ ವಹಿಸಲು ಬೆಳೆಗಳನ್ನು ಗುರುತಿಸಿ, ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.
  8. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಗಾಗಿ ಕೃಷಿ ವಲಯವಾರು ಬೆಳೆ ಯೋಜನೆ ರೂಪಿಸುವ ನಿಟ್ಟಿನಲ್ಲಿ ಅಧ್ಯಯನ ಕೈಗೊಂಡು ಸೂಕ್ತ ಶಿಫಾರಸ್ಸುಗಳನ್ನು ಮಾಡುವುದು.
  9. ರೈತರ ಉತ್ಪನ್ನಗಳ ಮೌಲ್ಯವರ್ಧನೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಉದ್ಯಮಗಳು, ಕೃಷಿ ಉತ್ಪನ್ನಗಳ ಬೆಲೆ ಪ್ರಸರಣ, ಕೃಷಿ ಉಪಯೋಗಿ ಯಂತ್ರಗಳ ಅಭಿವೃದ್ಧಿ (ಸಣ್ಣ ಮತ್ತು ಅತಿ ಸಣ್ಣ) ಮುಂತಾದವುಗಳ ಬಗ್ಗೆ ಅಧ್ಯಯನ ಜರುಗಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡುವುದು.
  10. ರೈತರ ಆದಾಯ ವೃದ್ಧಿ ಮತ್ತು ಕಲ್ಯಾಣ ಸಾಧಿಸುವ ನಿಟಿನಲ್ಲಿ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳು ಮತ್ತು ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (CACP) ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಂಪರ್ಕ ಸೇತುವೆಯಾಗಿ ಜವಾಬ್ದಾರಿಗಳನ್ನು ನಿರ್ವಹಿಸುವುದು.

ಇತ್ತೀಚಿನ ನವೀಕರಣ​ : 15-09-2022 08:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕೃಷಿ ಬೆಲೆ ಆಯೋಗ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ