ಅಭಿಪ್ರಾಯ / ಸಲಹೆಗಳು

ಅಧ್ಯಕ್ಷರ ಮುನ್ನುಡಿ

ಮಾಜಿ ಅಧ್ಯಕ್ಷರ ಮುನ್ನುಡಿ

ಕೋಟಿ ವಿದ್ಯೆಗಳಿಗಿಂತಲೂ ಮೇಟಿ ವಿದ್ಯೆಯೇ ಮೇಲು, ಮೇಟಿಯಿಂ ರಾಟಿ ನಡೆದುದಲ್ಲದೇ ದೇಶದಾಟವೇ?”
-
ಸರ್ವಜ್ಞ

ಕೃಷಿ ಕೃತ್ಯ ಕಾಯಕ ಮಾಡುವ ಪರಮಸದ್ಭಕ್ತನ ಪಾದವತೋರಯ್ಯ ಎನೆಗೆ. ಅದೆಂತೆಂದೊಡೆ ಆತನ ತನು ಶುದ್ಧ, ಆತನ ಮನ ಶುದ್ಧ, ಆತನ ಧನ ಶುದ್ಧ, ಅಂತಪ್ಪ ಪರಮಸದ್ಭಕ್ತನ ಮನೆಯ ಹೊಕ್ಕು ಪೂಜೆಯ ಮಾಡಿದ ಜಂಗಮವೇ ಪಾವನ ಕೂಡಲಸಂಗಮದೇವಾ”- ಬಸವಣ್ಣನವರು

ನೇಗಿಲ ಯೋಗಿ - ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ” – ರಾಷ್ಟ್ರಕವಿ ಕುವೆಂಪುರವರು

ಒಕ್ಕಲುತನ ಬೇಸಾಯ, ಆರಂಭ ಮುಂತಾದ ಪದಗಳಿಂದ ಕರೆಯುವ ಶ್ರಮಸಂಸ್ಕøತಿಯ ಪ್ರತೀಕವೇ ಕೃಷಿ. ಒಕ್ಕಲುತನವು ರೈತ – ಕಾರ್ಮಿಕ – ಆಯಗಾರರನ್ನೊಳಗೊಂಡ ಮೂರು ತಾಳಿನ ಕೂರಿಗೆಯಂತೆ ಸಂಘಟಿತ ಶ್ರಮ. ಒಕ್ಕಲುತನವು ಮಳೆ, ಗಾಳಿ, ಬಿಸಿಲು ಜೊತೆಗೆ ಹವಮಾನ ವೈಪರೀತ್ಯಗಳಾದ ಅನಾವೃಷ್ಟಿ, ಅತೀವೃಷ್ಟಿಯಂತಹ ಗಂಡಾಂತರಗಳಿಗೆ ಎದೆಯೊಡ್ಡಿ ನಿಲ್ಲಬೇಕಾಗುತ್ತದೆ. ಅದೇ ರೀತಿ ಮಾರುಕಟ್ಟೆ ಬೆಲೆ ಏರಿಳಿತದಂತಹ ಗಂಡಾಂತರಗಳಿಗೂ ಎದೆಯೊಡ್ಡಿ ನಿಲ್ಲಬೇಕಾಗುತ್ತದೆ. ಬಂದೊದಗಬಹುದಾದ ಗಂಡಾಂತರ ಪರಿಹಾರೋಪಾಯಗಳೊಂದಿಗೆ ಬಲಿಷ್ಟ ರೈತ ಸುಸ್ಥಿರ ಕೃಷಿ ನಿರ್ಮಿಸುವ ಧ್ಯೇಯೋದೇಶದೊಂದಿಗೆ ಕರ್ನಾಟಕ ಸರ್ಕಾರ ಕೃಷಿ ಬೆಲೆ ಆಯೋಗ ರಚನೆ ಮಾಡಿದ್ದು, ಅದರಂತೆ ಕೃಷಿ ಬೆಲೆ ಆಯೋಗ ಕಾರ್ಯ ನಿರ್ವಹಿಸುತ್ತಿದೆ.
- ಶ್ರೀ.ಹನುಮನಗೌಡ ಬೆಳಗುರ್ಕಿ

 

ಮಾಜಿ ಅಧ್ಯಕ್ಷರ ಮುನ್ನುಡಿ

ಸ್ಥಿರ ಆದಾಯ ಆ ಮೂಲಕ ಜೀವನ ಭದ್ರತೆಗಳೆಂಬುದು ರೈತನ ವಿಚಾರದಲ್ಲಿ ಎರಡು ಮುಖ್ಯ ಅಂಶಗಳ ಮೇಲೆ ಅವಲಂಬಿತವಾಗಿದೆ. ರೈತ ಕಷ್ಟಪಟ್ಟು ಉತ್ತಿ, ಬಿತ್ತಿ, ಬೆಳೆದ ಫಸಲು ಆತನ ಕೈ ಸೇರಬೇಕು. ಇದು ಉತ್ಪಾದನೆಗೆ ಸಂಬಂಧಿಸಿದ ವಿಚಾರ. ಇನ್ನು ಆ ರೀತಿ ಉತ್ಪಾದಿಸಿದ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಬೇಕು. ಇದು ಮಾರುಕಟ್ಟೆಗೆ ಸಂಬಂಧಿಸಿದ ವಿಚಾರ. ಉತ್ಪಾದನೆ ವಿಚಾರದಲ್ಲಿ ರೈತ ಮಳೆ, ಹವಾಮಾನ ಒಟ್ಟಾರೆ ನಿಸರ್ಗದ ಕೃಪೆಗೆ ಒಳಗಾಗಿದ್ದರೆ ಬೆಲೆ ವಿಚಾರದಲ್ಲಿ ಆತ ಮಾರುಕಟ್ಟೆ, ಮಧ್ಯವರ್ತಿಗಳ ಕೃಪೆಗೆ ಸಿಲುಕುವಂತಾಗಿರುವನು. ಒಂದರ್ಥದಲ್ಲಿ ರೈತನ ಆದಾಯ ಜೀವನ ಭದ್ರತೆಗಳು ಮಳೆಯೊಡನೆ ಮಾತ್ರವಲ್ಲ ಮಾರುಕಟ್ಟೆಯೊಡನೆಯೂ ಜೂಜಾಡಿ ಪಡೆಯುವಂತಾಗಿರುತ್ತವೆ.
ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ

ಇತ್ತೀಚಿನ ನವೀಕರಣ​ : 15-09-2022 08:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕೃಷಿ ಬೆಲೆ ಆಯೋಗ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ